ಬೇರು
ಅವನ
ಗೋರಿಯ ಮೇಲೆ
ಮಸಣದ್ಹೂವದು
ಹುಟ್ಟಿ , ಅರಳಿ ಕಂಪಿಸೆ
ಜೇನೊಂದು
ಗಂಧವ ಹೀರಿ , ಹೀರಿ ನೆಕ್ಕಿತದು !
ಅಲೆಅಲೆದು
ಕಾಡಮನೆಯೊಳು ಅಡಗಿ
ಚಂದದಿ ಗೂಡನಿಕ್ಕಿರೆ ,
ಹುಡುಹುಡುಕಿ
ಕಾಡಕರಿಯನು ಬಂದ !!
ಗೂಡನೊಡೆದ
ಹುಟ್ಟನ್ಹಿಂಡಿದ !
ಪೇಟೆಯೊಳು ಮಾರೆ ,
ಜನ ನೆಕ್ಕಿದರು
ದೇವರಿಗೆ ಎಡೆ ಹಿಡಿದರು !
ನಮ್ಮದೆಲ್ಲ
ಹೆಣದ ಮೇಲಿನ ಬದುಕು ||
ಅವನ
ಗೋರಿಯ ಮೇಲೆ
ಮಸಣದ್ಹೂವದು
ಹುಟ್ಟಿ , ಅರಳಿ ಕಂಪಿಸೆ
ಜೇನೊಂದು
ಗಂಧವ ಹೀರಿ , ಹೀರಿ ನೆಕ್ಕಿತದು !
ಅಲೆಅಲೆದು
ಕಾಡಮನೆಯೊಳು ಅಡಗಿ
ಚಂದದಿ ಗೂಡನಿಕ್ಕಿರೆ ,
ಹುಡುಹುಡುಕಿ
ಕಾಡಕರಿಯನು ಬಂದ !!
ಗೂಡನೊಡೆದ
ಹುಟ್ಟನ್ಹಿಂಡಿದ !
ಪೇಟೆಯೊಳು ಮಾರೆ ,
ಜನ ನೆಕ್ಕಿದರು
ದೇವರಿಗೆ ಎಡೆ ಹಿಡಿದರು !
ನಮ್ಮದೆಲ್ಲ
ಹೆಣದ ಮೇಲಿನ ಬದುಕು ||
bahala chandada baraha
ReplyDelete:) Thank you
ReplyDelete