Tuesday, 27 December 2011

ಹಂತ = A phase

ನಗುವವರು ಇಲ್ಲ
ಅಳುವವರೂ ಇಲ್ಲ 
ಕುಳಿತು ಆಡುವವರಿಲ್ಲ, ಕೂಡಿ ನಡೆಯುವವರಿಲ್ಲ !
ಹರಟೆ ಹೊಡೆದದ್ದಿಲ್ಲ
ಹಾಡು ಕೇಳಿದುದಿಲ್ಲ , ಹಾಡಿದಿದೂ ಇಲ್ಲ 
ಒಲ್ಲೆನೆನ್ದತ್ತರೂ ಮನ ,
ಬಿಡಲಿಲ್ಲ ಈ ಜನ , ಒತ್ತಡವನೇ ಹೇರಿದರು 
ಕರುಣೆ ಇಲ್ಲದೆ ಪೈಪೋಟಿಯೊಂದಿಗೆ ದ್ವೆಷವನೆ ತುಂಬಿದರು !!

ಅತಿ ಉತ್ಸಾಹದಿ ಬಯಸಿರುತ್ತಿದ್ದೆ ಜಯವ ಎಲ್ಲದರಲ್ಲಿ 
ಪಡೆದೆನೆಂದರೆ ಜಯವ 
ಸಂಭ್ರಮವೂ ಇಲ್ಲ ದುಃಖವೂ ಇರಲಿಲ್ಲ !
ಬಯಸಿದ್ದು ತಪ್ಪೇ ?
ಬೆನ್ನು ಬಡಿಯಲು ಒಂಟಿ ಹಸ್ತವ  ??
ತಲೆಯನಿಟ್ಟು ಪವಡಿಸೆ ತೊಡೆಯೊಂದ ಬೇಡಿದಿದೂ ತಪ್ಪೇ ??
ಯಾವುವೂ ಇಲ್ಲ ಯಾರೂ ಇಲ್ಲ 
ಕರುಣೆ ಇಲ್ಲದ ಒತ್ತಡದಿ 
ನನಗಿರುವುದೊಂದೇ ಬೇಗುದಿ ಎಲ್ಲ !!

ನಾನೇನು ಸಾಚಾ , ಸರ್ವ ಸಂಪನ್ನನಲ್ಲ ಬಿಡಿ 
ನಾನೂ ನಿಮ್ಮಂತೆ , ನಿನ್ನಂತೆ .
ಹಠವುಂಟು , ದ್ವೇಷವೂ ವುಂಟು ,
ಬರೆಯಲು ಪೆನ್ನು ಕೊಡದಿಹ , ಬರಡು ಮನದವ ನಾ !!
ಓಡಿರುವೆ ಬಿದ್ದಿರುವೆ ,
ನೆಲದಲಿ ಬಿದ್ದ ಮೊಳೆಯೊಂದ ಕಂಡು ಬೆನ್ನು ಬಾಗಿಸಿರುವೆ 
ಆದರೂ ,
ಬಯಸಿದೆ ಬಯಸುವೆ , 
commercial ಅಲ್ಲದ  ಸ್ವಾರ್ಥವಿಲ್ಲದ ಚೂರು ಭಾವವ ,
ಹಂಬಲದಿ ಆಸೆಯಲಿ .
ಏನು ಮಾಡುವುದು , ಸಿಗುವುದು 
ಮತ್ತದೇ ಏಕಾಂಗಿತನ , ನಂಬುಗೆ ಇಲ್ಲದ ನನ್ನ ಮನ 
ಮತ್ತದೇ ಅಳು , ಮತ್ತದೇ ಹುಚ್ಚು ಏಕಾಂಗಿ ನಗು        !!