''' ಕೊಳದ ಕಮಲ ''
ಕೊಳೆತು ನಿಂತ
ಕೊಳದಿ ,
ಕಮಲ ಅರಳಿತ್ತು ,
ಅಲೆಮಾರಿ ವಿಧಿ ,
ವಾಸ್ತವ್ಯ ಹೂಡಿತ್ತು |
ಭೂಮಿ ಬರಡಾದರೆನಂತೆ ?
ರಾಗಿಯ ಕಾಳೊಂದು
ಕರಿಯ ತೆನೆ ಹಾಕಿತ್ತು |
ಕಡಗೋಲಿನಡಿ, ನೊಂದ
ಮಜ್ಜಿಗೆಯ ಜಡ ಜಿಡ್ಡು
ಬೆಣ್ಣೆಯಾಗಿ ತೇಲಿತ್ತು
ತುಪ್ಪದಿ ಕಂಪಿಸಿತ್ತು |
ರವಿಯು ,
ಮಲಗುವ ಮುನ್ನ
ಕಮಲ ನಲುಗಿತ್ತು ,
ರಾಗಿ ಹಿಟ್ಟಾಗಿತ್ತು
ಮಜ್ಜಿಗೆಯನ್ನ ಹುಳಿ
ಮೈಲಿಗೆ ಮಾಡಿತ್ತು ||
No comments:
Post a Comment