'' ಹಠ ''
ಬದುಕು
ಬೆಂಗಾಡಲ್ಲ,
ಬರಿಯ ಮರಳಿಲ್ಲ ,
ಹಸಿರ ಎಲೆಯೂ ಅಲ್ಲ , ಮೆತ್ತನೆಯ ಹಾಸಲ್ಲ ,
ಎಲ್ಲ ಮಿಶ್ರಣವಿಹುದು
ತುಸು ಉಪ್ಪು , ತುಸು ಸಿಹಿಯು
ಎದೆ ಕಟ್ಟು ,
ನಡ ಕಟ್ಟು !
ತೋಳ ಬಿಗಿ !
ಎಡವುದಿದೆ , ಮತ್ತೆ ಓಡುವುದು
ನಿಲಬೇಡ ನಡೆ ಮುಂದೆ
ಹರಿಯುತ , ಝುಳು ಝುಳು ಎನುತ
ಮುಳ್ಳಿರಲಿ, ಕಲ್ಲಿರಲಿ
ಇಳುಕಿನೆಡೆಗೆ
ಗುರಿಯನೈದುವೆಡೆಗೆ
ಸಾರ್ಥಕ್ಯದೆಡೆಗೆ ||
No comments:
Post a Comment