ನಗುವವರು ಇಲ್ಲ
ಅಳುವವರೂ ಇಲ್ಲ
ಕುಳಿತು ಆಡುವವರಿಲ್ಲ, ಕೂಡಿ ನಡೆಯುವವರಿಲ್ಲ !
ಹರಟೆ ಹೊಡೆದದ್ದಿಲ್ಲ
ಹಾಡು ಕೇಳಿದುದಿಲ್ಲ , ಹಾಡಿದಿದೂ ಇಲ್ಲ
ಒಲ್ಲೆನೆನ್ದತ್ತರೂ ಮನ ,
ಬಿಡಲಿಲ್ಲ ಈ ಜನ , ಒತ್ತಡವನೇ ಹೇರಿದರು
ಕರುಣೆ ಇಲ್ಲದೆ ಪೈಪೋಟಿಯೊಂದಿಗೆ ದ್ವೆಷವನೆ ತುಂಬಿದರು !!
ಅತಿ ಉತ್ಸಾಹದಿ ಬಯಸಿರುತ್ತಿದ್ದೆ ಜಯವ ಎಲ್ಲದರಲ್ಲಿ
ಪಡೆದೆನೆಂದರೆ ಜಯವ
ಸಂಭ್ರಮವೂ ಇಲ್ಲ ದುಃಖವೂ ಇರಲಿಲ್ಲ !
ಬಯಸಿದ್ದು ತಪ್ಪೇ ?
ಬೆನ್ನು ಬಡಿಯಲು ಒಂಟಿ ಹಸ್ತವ ??
ತಲೆಯನಿಟ್ಟು ಪವಡಿಸೆ ತೊಡೆಯೊಂದ ಬೇಡಿದಿದೂ ತಪ್ಪೇ ??
ಯಾವುವೂ ಇಲ್ಲ ಯಾರೂ ಇಲ್ಲ
ಕರುಣೆ ಇಲ್ಲದ ಒತ್ತಡದಿ
ನನಗಿರುವುದೊಂದೇ ಬೇಗುದಿ ಎಲ್ಲ !!
ನಾನೇನು ಸಾಚಾ , ಸರ್ವ ಸಂಪನ್ನನಲ್ಲ ಬಿಡಿ
ನಾನೂ ನಿಮ್ಮಂತೆ , ನಿನ್ನಂತೆ .
ಹಠವುಂಟು , ದ್ವೇಷವೂ ವುಂಟು ,
ಬರೆಯಲು ಪೆನ್ನು ಕೊಡದಿಹ , ಬರಡು ಮನದವ ನಾ !!
ಓಡಿರುವೆ ಬಿದ್ದಿರುವೆ ,
ನೆಲದಲಿ ಬಿದ್ದ ಮೊಳೆಯೊಂದ ಕಂಡು ಬೆನ್ನು ಬಾಗಿಸಿರುವೆ
ಆದರೂ ,
ಬಯಸಿದೆ ಬಯಸುವೆ ,
commercial ಅಲ್ಲದ ಸ್ವಾರ್ಥವಿಲ್ಲದ ಚೂರು ಭಾವವ ,
ಹಂಬಲದಿ ಆಸೆಯಲಿ .
ಏನು ಮಾಡುವುದು , ಸಿಗುವುದು
ಮತ್ತದೇ ಏಕಾಂಗಿತನ , ನಂಬುಗೆ ಇಲ್ಲದ ನನ್ನ ಮನ
ಮತ್ತದೇ ಅಳು , ಮತ್ತದೇ ಹುಚ್ಚು ಏಕಾಂಗಿ ನಗು !!