here i am
Thursday, 21 July 2011
Aakrandana
'' ಆಕ್ರಂದನ ''
ಬದುಕು
ಬಲು ಭಾರ
ಒಂಟಿ ಮನಕೆ , ಒಬ್ಬಂಟಿಕೆ.
ತತ್ವಗಳಲೇನೋ ತಥ್ಯವಿದೆ ,
ನಂಬಿ , ನಡೆಯೆ..
ನಿನ್ನ
ತಿಥಿಯದು ದಿಟ !!
ಛೇಡಿಕೆಯ ಛಡಿ ಏಟು
ಕಷ್ಟಗಳ
ಕಣ್ಣೀರ ಕೋಡಿ !
ಕೊರಳು ಕಟ್ಟಿ ಬಂದರೂ
ಕಣ್ಣಲಿ ಹನಿ ತೇಲಿದರೂ
ನುಂಗಬೇಕು
ಮತ್ತೆ ನಗಬೇಕು !
ನಿನಗೆ ನೀ
ಕಚಗುಳಿ ಇಡುತಿರಬೇಕು ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment